ಹುಬ್ಬಳ್ಳಿ: ಗುಡಗೇರಿ, ರಾಜ್ಯ ಯಾವುದೇ ಮೂಲೆಯಲ್ಲಿ ಈ ಹೆಸರು ಹೇಳಿದರೆ ಸಾಕು ಇದಕ್ಕೆ ಉತ್ತರವಾಗಿ ಆ ಊರಿನ ಜನರ ಬಾಯಿಯಲ್ಲಿ ಬರುವ ಮಾತು ಎನ್. ಬಸವರಾಜ ಮತ್ತು ಶ್ರೀ ಸಂಗಮೇಶ್ವರ ನಾಟ್ಯ ಸಂಘ. ರಾಜ್ಯ ಸೇರಿದಂತೆ ಹೊರರಾಜ್ಯಗಳಿಗೂ ರಂಗಭೂಮಿಯ ಸಿಹಿ ಹಂಚಿದ ಕೀರ್ತಿ ಗುಡಗೇರಿಯ ಸಂಗಮೇಶ್ವರ ನಾಟ್ಯ ಸಂಘ ಹಾಗೂ ಬಸವರಾಜ ಅವರಿಗೆ ಸಲ್ಲುತ್ತದೆ. ಇದೇ ನ. 17ರಂದು ಶ್ರೀಸಂಗಮೇಶ್ವರ ನಾಟ್ಯ ಸಂಘ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
ಕಂಪೆನಿಯ ಸುವರ್ಣ ಮಹೋತ್ಸವ ಆಚರಣೆ ಬಸವರಾಜ ಅವರ ಕನಸು ಆಗಿತ್ತು. ಅದನ್ನು ಕಣ್ಣಾರೆ ನೋಡಲು ಆವರಿಲ್ಲ. ಅವರ ಮಕ್ಕಳು ತಮ್ಮ ತಂದೆಯವರ ಕನಸನ್ನು ನನಸು ಮಾಡುತ್ತಿದ್ದಾರೆ.
ಕಲ್ಲು ಮುಳ್ಳಿನ ಹಾದಿಯಲ್ಲಿ ಕಂಪನಿ
ಬಸವರಾಜ ಒಬ್ಬ ಕಲಾವಿದರಾಗುವುದು ಅವರ ಪಾಲಕರಿಗೆ ಸುತಾರಾಂ ಇಷ್ಟ ವಿರಲಿಲ್ಲ. ಮನೆಯವರ ವಿರೋಧದ ನಡುವೆಯೂ ಕಲಾ ಆರಾಧನೆಯನ್ನು ಮುಂದುವರಿಸಿದರು. ಅದಕ್ಕಾಗಿಯೇ 1963ರ ನ. 17ರಂದು ಶ್ರೀ ಸಂಗಮೇಶ್ವರ ನಾಟ್ಯ ಸಂಘವನ್ನು ಹುಟ್ಟು ಹಾಕಿದರು. ಗುಡಗೇರಿಯ ಸಂಗಮೇಶ್ವರನ ಭಕ್ತನಾಗಿದ್ದರಿಂದ ತಮ್ಮ ಕಂಪೆನಿಗೆ ಆ ಹೆಸರು ಇಟ್ಟರು.
ಕಂಪೆನಿಯ ಸಾಧನಾರ್ಥವಾಗಿ ಸುಮಾರು 12ವರ್ಷಗಳ ಕಾಲ ಮಾತೃ ಕಂಪನಿಯೊಂದಿಗೆ ಇನ್ನೆರಡು ಶಾಖೆಗಳನ್ನು ಹುಟ್ಟು ಹಾಕಿ ಯಶಸ್ವಿಯಾಗಿ ನಾಟಕಗಳ ಪ್ರದರ್ಶನ ನಡೆಸಿದ್ದರು. ಆದರೆ ಸಿನಿಮಾ, ಸಿಡಿ, ಚಾನೆಲ್ಗಳ ಹಾವಳಿಯಿಂದಾಗಿ, ರಂಗಭೂಮಿಗೆ ಪ್ರೋತ್ಸಾಹ ಕಡಿಮೆಯಾಗಿ ಶಾಖೆಗಳು ಮುಚ್ಚಲಪಟ್ಟವು. ಆದರೆ ಮಾತೃ ಕಂಪನಿ ಮಾತ್ರ ಎಂತಹ ಕಠಿಣ ಹಾದಿಗೂ ಹೆದರದೆ ಇಂದು 50 ವರ್ಷಗಳನ್ನು ಪೂರೈಸಿದೆ.
ಮಹಾನ ಕಲಾವಿದರಿಂದ ನಟೆ
ರಂಗಭೂಮಿಯ ಕಲಾವಿದರು ಹಿಂದಿನಿಂದಲೂ ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಲ್ಲ, ಇಂತಹ ಸಂದರ್ಭದಲ್ಲಿ ಬಸವರಾಜ ಕೇವಲ ಒಂದು ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ಅನೇಕ ಕಲಾವಿದರಿಗೆ ಅನ್ನ ನೀಡಿದರು. ಇತ್ತೀಚಿನ ಕೆಲ ವರ್ಷಗಳ ಹಿಂದೆ ನೀಡುತ್ತ್ತಿದ್ದ ಸರಕಾರದ ಸಹಾಯ ಧನವನ್ನು ಲೆಕ್ಕಿಸದೇ ಕಲಾವಿದರನ್ನು ಸಾಕಿದ ಸಾಧನೆ ಶ್ರೀ ಸಂಗಮೇಶ್ವರ ನಾಟ್ಯಸಂಘದ್ದು.
ಕಲ್ಪನಾ, ಕಲ್ಯಾಣಕುಮಾರ, ಸುಧೀರ, ಲೀಲಾವತಿ, ಜಯಂತಿ, ಜಿ.ವಿ.ಕೃಷ್ಣ, ಶ್ರೀನಾಥ, ಶೈಲಶ್ರೀ, ರಾಜೇಶ, ನರಸಿಂಹರಾಜು, ಪಂಡರಿಬಾಯಿ, ಮಾಲಾಶ್ರೀ ಅವರಂತಹ ಮೇರು ನಟರು ಬಸವರಾಜ ಅವರ ಶ್ರೀ ಸಂಗಮೇಶ್ವರ ನಾಟ್ಯ ಸಂಘದಲ್ಲಿ ನಟಿಸಿದ್ದಾರೆ. ಆಮೂಲಕ ಜನರು ಅತೀ ಹತ್ತಿರದಿಂದ ರಂಗಭೂಮಿಯ ರಸದೌತನ ಬಡೆಸಿದ ಕೀರ್ತಿ ಶ್ರೀ ಸಂಘಮೇಶ್ವರನಾಟ್ಯ ಸಂಘಕ್ಕೆ ಸಲ್ಲುತ್ತದೆ.
ಇದೊಂದು ತುಂಬು ಕುಟುಂಬ
ಶ್ರೀ ಸಂಗಮೇಶ್ವರ ನಾಟ್ಯ ಸಂಘ ಕೇವಲ ಒಂದು ನಾಟಕ ಕಂಪನಿಯಲ್ಲ. ಇದೊಂದು ತುಂಬು ಕುಟುಂಬ. ಇಲ್ಲನ ವ್ಯವಸ್ಥೆಗಳು ಇದಕ್ಕೆ ಪೂರವಾಗಿವೆ. ಇಲ್ಲಿನ ಕಲಾವಿದರಿಗೆ ಉಳಿದ ಕಂಪನಿಗಳಿಗಿಂತ ತುಸು ಕಡಿಮೆ ಸಂಭನೆ ಇತ್ತು ನಿಜ. ಆದರೂ ಕಾವಿದರೂ ಈ ಕಂಪನಿಯನ್ನೆ ಅರುಸುತ್ತಾರೆ. ಅದಕ್ಕೆ ಕಾರಣ ಈ ತುಂಬು ಕುಟುಂಬದಂತೆ ಇರುವ ವ್ಯವಸ್ಥೆ.
ಊಟದಲ್ಲಿ ಉತ್ತಮ
ಉಳಿದ ಕಂಪನಿಗಳಿಗೆ ಹೋಲಿಸಿದರೆ ಶ್ರೀ ಸಂಗಮೇಶ್ವರ ನಾಟ್ಯ ಸಂಘ ಊಟದ ವ್ಯವಸ್ಥೆ ಮಾತ್ರ ಅಪ್ಪಟ ಮನೆ ಊಟದಂತಿರುತ್ತದೆ. ಪ್ರತಿ ಸೋಮವಾರ ಸಿಹಿಅಡುಗೆ ಮಾಡುವುದನ್ನು ಬಿಡುವುದಿಲ್ಲ. ಇದು ಬಸವಣ್ಣನ ಭಕ್ತ ಬಸವರಾಜ ಆವರು ಮಾಡಿದ ಪದ್ಧತಿ. ಈ ಪದ್ಧತಿಯನ್ನು ಅವರ ಮಕ್ಕಳು ಮುಂದುವೆರಸಿಕೊಂಡು ಹೋಗುತ್ತಿದ್ದಾರೆ.
ಪಂಚಮಿ ಬಂದರೆ ಉಂಡೆಗಳು, ದೀಪಾವಳಿ, ದಸರಾ ಹಬ್ಬಗಳಲ್ಲಿ ಕಡುಬು, ಹೋಳಿಗೆಯಂತಹ ಅಡುಗೆಯನ್ನು ಮಾಡುವುದರಿಂದ ಕಲಾವಿದರು ಕೆಲಸಗಾರರು ತಮ್ಮ ಮನೆಯನ್ನು ನೆನೆಯುವುದೆ ಇಲ್ಲ. ಜಾತ್ರೆಯಲ್ಲಿ ಕ್ಯಾಂಪ್ಗಳನ್ನು ಹಾಕಿದಾಗ ಬೇರೆ ಕಂಪನಿಯ ಟೆಂಟ್ ಹಾಕುವ ಹುಡುಗರು ಗುಡಗೇರಿ ಕಂಪನಿಯನ್ನು ಅರಸುತ್ತ ಬರುತ್ತಾರೆ.
ಖಾಯಂ ಕಲಾವಿದರು
ಶ್ರೀ ಸಂಗಮೇಶ್ವರ ನಾಟ್ಯ ಸಂಘದಲ್ಲಿ ತಿಂಗಳ ವೇತನ ವ್ಯವಸ್ಥೆ ಇದೆ. ಕಳೆದ ಇಪ್ಪತ್ತು ವರ್ಷಗಳಿಂದ ಇದೇ ಕಂಪನಿಯಲ್ಲಿ ನಟಿಸಿಕೊಂಡು ಬಂದವರಿದ್ದಾರೆ. ಆದ್ದರಿಂದ ಕಂಪೆನಿ ಯಾರಿಗೂ ದಿನದ ಸಂಬಳ ನೀಡುವುದಿಲ್ಲ. ಒಟ್ಟಾರೆಯಾಗಿ ಕಂಪನಿಯ ತಿಂಗಳ ಒಟ್ಟು ಖರ್ಚು 2 ಲಕ್ಷ ರೂ. ಬರುತ್ತದೆ.
ಅಪ್ಪಾಜಿ ಅವರ ಕನಸು
ನಮ್ಮ ಕಂಪನಿ ಸುವರ್ಣ ಮಹೋಹತ್ಸವ ಆಚರಿಸಬೇಕು ಎಂಬುದು ನಮ್ಮ ತಂದೆಯ ಕನಸಾಗಿತ್ತು. ಆದರೆ ಅವರು ನಮ್ಮಂದಿಗೆ ಇಲ್ಲ. ಆದರೂ ಆವರ ಆಸೆಯಂತೆ ಕಂಪನಿ ಸುವರ್ಣ ಮಹೋತ್ಸವವನ್ನು ಆಚರಣೆ ಮಾಡುತಿದೆ.
ಎನ್. ಬಸವರಾಜ, ಯಾವತ್ತೂ ಕಂಪನಿಯನ್ನು ಹಾನಿಯಲ್ಲಿ ನಡೆಸಿದ ವ್ಯಕ್ತಿಯಲ್ಲ. ತಿಂಗಳ 23ದಿನಗಳು ಕಂಪನಿ ಕಲೆಕ್ಷನ್ ಹಾನಿಯಾಗಿದ್ದರೂ, ಕೊನೆಯ ಮೂರು ದಿನಗಳಲ್ಲಿ ಜನ ಪ್ರಿಯ ನಾಟಕಗಳನ್ನು ಆಡಿಸಿ, 23 ದಿನಗಳ ಹಾನಿಯನ್ನು ತುಂಬುತ್ತಿದ್ದ. ಹೀಗೆ 49 ವರ್ಷ ನಡೆಸಿಕೊಂಡು ಬಂದಿದ್ದ. ತಮ್ಮ ಮಕ್ಕಳು ಕಂಪನಿಯತ್ತ ಸುಳಿಯದಂತೆ ನೋಡಿಕೊಂಡಿದ್ದ. ಆದರೆ ಅವರ ಮಕ್ಕಳು ಉತ್ತಮ ರೀತಿಯಲ್ಲಿ ನಾಟಕ ಕಂಪನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಪಕ್ಕಣ್ಣ ಅಮರಗೋಳ, ಸಾಹಿತಿ ಕಲಾವಿದ.

No comments:
Post a Comment