Saturday, November 10, 2012

ರೈತನಿಗೆ ಸಿಹಿಯಾಗುವುದದೇ ಸೀಗೆ ಹಣ್ಣಿಮೆ



ಕೈಗೆ ಸಿಗದ ಬೆಳೆ  ಕೈಗೆ ಭಾರವಾದ ಬೆಲೆ  ಹಿಂಗಾರು ಸಿಗಲಿಲ್ಲ ಮುಂಗಾರು ಬರಲಿಲ್ಲ 


 ರೈತನಿಗೆ ಸಿಹಿಯಾಗುವುದದೇ ಸೀಗೆ ಹಣ್ಣಿಮೆ 

 ಹುಬ್ಬಳ್ಳಿ: ರೈತನು ಭೂಮಿಯನ್ನು ನಂಬಿ ಬದುಕುತ್ತಾನೆ. ಅಲ್ಲದೆ ಅದೇ ಭೂಮಿಯಲ್ಲಿ ಉತ್ತಿ ಬಿತ್ತಿ ಬೆಳೆದು, ಜೀವ ಸಂಕುಲವನ್ನು ಪ್ರತ್ಯೇಕ್ಷವಾಗಿ, ಪರೋಕ್ಷವಾಗಿ ಸಲುಹುತ್ತಾನೆ. ಅದಕ್ಕಾಗಿ ಭೂಮಿತಾಯಿಯನ್ನು ಗೌರವಿಸುತ್ತಾನೆ, ಪೂಜಿಸುತ್ತಾನೆ. ಇದಕ್ಕೆ ಪೂರಕ ವಾಗಿ ಬರುವ ಸೀಗೆ ಹುಣ್ಣಿಮೆ.
 ಮನೆಯಲ್ಲಿ ಹಬ್ಬದ ಅಡುಗೆಯ ಮಾಡಿ, ಊರ ಬೀಗರನ್ನ ಕರೆಸಿ, ಗೆಜ್ಜಿ, ಕೊಲ್ಹಾರಿಗಳಿಂದ ಸಿಂಗರಿಸಿದ ಎತ್ತುಗಳ ಕೊಳ್ಳ ಕಟ್ಟಿ, ಊರ ಮುಂದಿನ ಹೊಲಕ್ಕ ಹೊರಟ ನಿಂತ್ರ ಜಾತ್ರಿಗೆ ಹೊರಟಂಗ  ಇರ್ತಿತ್ತು ಕೆಲ ವರ್ಷಗಳ ಹಿಂದಿನ ಸೀಗೆ ಹುಣ್ಣಿಮೆ ಆಚರಣೆ.
 ಆದರೆ ಇತ್ತೀಚಿನ ಮೆಳೆ ಬಾರದೆ ರೈತನೇ ತಲೆಗೆ ಕೈ ಹಚ್ಚಿ ಕುಳಿತಿದ್ದಾನೆ. ಇಂತಹ ಸಂದರ್ಭದಲ್ಲಿ, ಮೆರಗು ಕಾಣುವುದೆ ಸೀಗೆ ಹುಣ್ಣಿಮೆ.
 ಕೈಗೆ ಬಾರದ ಬೆಳೆ
 ಹಿಂಗಾರು ಕೈಕೊಟ್ಟಿತು. ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಗಾಳದ ಹತ್ತಿ, ಶೇಂಗಾ, ಬೆಳ್ಳುಳ್ಳಿ, ರೈತನ ಕೈಗೆ ಬಾದರೆ ಹೋಗಿವೆ. ಬಂದ ಬೆಳೆ ಮಾತ್ರ ಬಿತ್ತನೆಗಾದ ಕರ್ಚಿಗೂ ಸಾಲದಾಗಿದೆ. ಜಾನುವಾರುಗಳಿಗೆ ಮೇವಾದರೂ ದೊರೆತೀತು ಎಂದರೆ, ಅದೂ ಸಿಗದೆ ಜಾನುವಾರುಗಳು ಗೋ ಶಾಲೆ ಸೇರಿಕೊಂಡಿವೆ. ವಿಪಾರ್ಯಾಸವೆಂದರೆ ಅದೇಷ್ಟೋ ರೈತರು ಮೇವು ಸಿಗದೆ ಇರುವುದರಿಂದ ತಮ್ಮ ಜಾನುವಾರುಗಳನ್ನು ಮಾರಿಬಿಟ್ಟಿದ್ದಾರೆ.
 ಕೈಗೆ ಎಟುಕದ ಬೆಲೆ
 ಸರೀ.. ಬಂದ ಬೆಳೆಯನ್ನು ಮಾರಿ ಬಂದ ಹಣದಿಂದ ಸರಳಾಗಿ ಹಬ್ಬ ಮಾಡೋಣ ಎಂದರೆ ಅದಕ್ಕೂ ವಿಘ್ನ. ಬೆಲೆ ಏರಿಕೆಯ ಬಿಸಿ. ಹಬ್ಬದ ಅಡುಗೆಗ ಬೇಕಾದ ಸಾಮಗ್ರಿಗಳಾದ ಬೆಲ್ಲ, ಸಕ್ಕರೆ, ಹಿಟ್ಟು , ಎಣ್ಣೆ, ಗೊಬ್ಬರಿ ಮುಂತಾದವುಳ ಬೆಲೆ ಕೆಳಿದರೆ ತಿನ್ನಲು ಮನಸಾಗುವುದಿಲ್ಲ. ಒಂದು ಕಡೆ  ಕೈಗೆ ಬಾರದ ಬೆಳೆಗಳು, ಇನ್ನೊಂದು ಕಡೆ ಕೈಗೆ ಭಾರವಾದ ಬೆಲೆಗಳು. ಇವೆಡರ ಮಧ್ಯ ಬಂದಿದೆ ಸೀಗೆ ಹಣ್ಣಿಮೆ.
 ಮನಸ್ಸು ಮಾಡದ ರೈತ
 ಇದ್ದರಲ್ಲೇ ಹೇಗಾದರೂ ಮಾಡಿ ಹಬ್ಬ ಮಾಡೋಣ ಎಂದರೆ, ರೈತನಿಗೆ ಆ ಮನಸ್ಸು ಹೇಗಾದರೂ ಬಂದೀತೂ ಅಂತ. ಹಿಂದೆ, ಎತ್ತುಗಳ ಕೊಳ್ಳು ಕಟ್ಟಿ  ಮನೆ ,ಮಂದಿಯಲ್ಲ ಸೇರಿ ಸೀಗೆ ಹುಣ್ಣಿಮೆ ಆಚರಿಸುಚ ಸಂಭ್ರಮ ಎಲ್ಲಿ , ಇಂದು, ಮನೆಮಗನ, ಮಂದಿಮಗನ ಕೈಯಲ್ಲೋ, ಪೂಜಾ ಸಾಮಗ್ರಿ ಕೊಟ್ಟು ತಮ್ಮ ಹೊಲಕ್ಕೂ ಪೂಜೆ ಮಾಡುವಂತೆ ಮನವಿ ಮಾಡಿಕೊಳ್ಳವ ಪರಿಸ್ಥಿತಿ ಎಲ್ಲಿ?
 ಇನ್ನು  ಹೊಲಕ್ಕೆ ಹೋಗಿ ಬೆಳೆ ನೋಡುವಂತಿಲ್ಲ. ಕರಿ ನೆಲದಲ್ಲಿ ಕಂಡರೆ ತಾನೇ ನೋಡುವುದು!. ಬಿತ್ತಿದ ಹೊಲಗಳಿಗು, ಬಿತ್ತದ ಹೊಲಗಳಿಗೂ ಅಂತಾ ವ್ಯತ್ಯಾಸವೇನು ಇಲ್ಲ. ವರುಣ ಮಳೆ ನೀಡುತ್ತಾನೋ ಇಲ್ಲವೋ ಗೊತ್ತಿಲ್ಲ. ರೈತನ ಕಣ್ಣಲ್ಲಿ  ಕಣ್ಣಿರೂ. ಅದೂ ಬರುವುದಿಲ್ಲ, ಬರದ ಬಿಸಿಗೆ ಬತ್ತಿ ಹೋಗಿದ್ದರೆ?
 ---------------------------------------------------------------------
 ಸಂಪ್ರದಾಯ ಬಿಡುವಂತಿಲ್ಲ
 ಬರದಿಂದಾಗಿ ವಿದ್ಯುತ್ ಕೊರತೆ ಉಂಟಾಗಿದೆ. ಟ್ರ್ಯಾಕ್ಟರ್‌ಗಳಿಗೆ ಜನರೇಟರ್ ಅಳವಡಿಸಿ ಬೊರ್‌ವೆಲ್ಲನಿಂದ ನೀರು ಎತ್ತುವ ಪರೀಸ್ಥಿತಿ ಉಂಟಾಗಿದೆ. ಜಾನುವಾರುಗಳಿಗೆ ಮೇವು ದೊರೆತಿರುವುದರ ಹೊರತು ರೈತನ ಪರಿಸ್ಥಿತಿ ಗಂಭೀರವಾಗಿದೆ. ಇನ್ನೂ  ಒಣ ಭೂಮಿ ರೈತರ ಪರಿಸ್ಥಿತಿ ಕೇಳುವಂತಿಲ್ಲ. ಸೀಗೆ ಹುಣ್ಣಿಮೆ ರೈತರ ಸಂಪ್ರದಾಯ ವಾಗಿದ್ದರಿಂದ ಆಚರಣೆ ಬಿಡುವಂತಿಲ್ಲ.
 * ಡಾ. ಎನ್.ಎನ್. ಅರಬಗೊಂಡ, ರೈತರು, ಗ್ರಂಥಪಾಲಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬ್ಯಾಡಗಿ.
****
ಸರಳವಾಗಿ ಮಾಡ್ತಿವಿ
ಮೇವು ಇಲ್ಲದಕ್ಕೆ  ಒಂದು ಯತ್ತನ್ನು ಮಾರಿದ್ದೇವೆ. ಬೆಳೆಯಂತೂ ಕೇಳುವಂತೆ ಇಲ್ಲ. ಭೂಮಿತಾಯಿ ನಂಬಿದವರನ್ನು ಯಾವತ್ತು ಕೈ ಬಿಟ್ಟಿಲ್ಲ. ಈವರ್ಷ ಕೊಡದೆ ಹೋದರು, ಮುಂದಿನ ವರ್ಷವಾದರೂ ಕೊಡತಾಳ. ಸೀಗಿ ಹುಣ್ಣಿಮೆ ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬಂದಿದ್ದು ಇದೆ. ಸರಳ ರೀತಿಲ್ಲಿ ಯಾದರೂ ಭೂಮಿ ತಾಯಿ ಪೂಜೆ ಮಾಡುತ್ತೇವೆ.
ಧರ್ಮಣ್ಣ ದೊಡ್ಡಮನಿ, ಮಂಡಿಗನಾಳ.
 

No comments:

Post a Comment